ಸಣ್ಣದಾಗಿ ಗರಿಗೆದರಿ ಬಣ್ಣಹರಡಿಕೊಂಡು ಹೊಮ್ಮಿದ ಮನದಾಳದ ಮಾತು..

ಪ್ರತಿ ಮನುಷ್ಯ ಕೂಡ ಏನಾದರು ಒಂದು ಕಾರ್ಯವನ್ನೂ ಮಾಡಲು ಪ್ರತ್ಯೇಕವಾದ ಒಂದು ಅವಶ್ಯಕತೆ ಹಾಗು ಅಗತ್ಯ ಇದ್ದೆ ಇರುತ್ತದೆ.
ಯಾಕೆ ಅಂತೀರಾ.. ?? ನೀವೇ ಯೋಚನೆ ಮಾಡಿ ನೀವು ಯಾವುದಾದರು ಕೆಲಸ ಮಾಡೋಕ್ಕೆ ಅಂತ ಹೋಗ್ತೀರಾ, ಅದನ್ನು ಸುಮ್ನೆ ಮಾಡ್ತೀರಾ…!! ಇಲ್ಲ ಅದಕ್ಕೆ ಏನಾದ್ರು ಒಂದು ಮುಖ್ಯ ಉದ್ಧಿಷ್ಯ ಇದ್ದೆ ಇರುತ್ತದೆ..

ಕಚೀರಿಗೆ ಹೋಗ್ತೀರಾ -ಹಣದ ಅವಶ್ಯಕತೆ ನಿಮ್ಮ ಅಸ್ತಿತ್ವದ ಅಗತ್ಯತೆ.
ಶಿಸ್ತಿನಿಂದ ಮನೆಯಿಂದ ಹೊರ ಬರಿತ್ತೀರ – ಪರರೊಡನೆ ಇರುವ ಅಗತ್ಯತೆ ಹಾಗೂ ನಿಮ್ಮ ವ್ಯಯಕ್ತಿಕ ವ್ಯಕ್ತಿತ್ವ್ವನ್ನೂ ಉಲ್ಲೇಖಿಸುವ ಅವಶ್ಯಕತೆ.
ಹೀಗೆ ಹಲವು ನೂರಾರು ಹೇಳಬಹುದು..

ಒಂದು ಕಥೆ ಹೇಳೋಣ ಅಂತ ಇದ್ದೀನಿ..
ಸಿಂಹ ನಿಮ್ಗೆಲಾರ್ಗು ಗೊತ್ತೇ ಇದೆ…
ಸಿಂಹ; ಎಲ್ಲರ್ಗೂ ಗೊತ್ತಿರೋ ಹಾಗೆ ಮೃಗ ರಾಜ.. ಅನ್ಯ ಮೃಗಗಳನ್ನು ಕೊಂದು ತಿನ್ನುತ್ತದೆ. ಆದ್ರೆ ಒಂದು ಮಜ್ಜ ಗೊತ್ತ ಸಿಂಹ ಮಾ೦ಸ ತಿನ್ನುತ್ತೆ ನಿಜ, ಆದ್ರೆ ತನ್ನ ವರ್ಗದವರನ್ನು ತಿನ್ನೋಲ್ಲ.. ಹಾಗೆಯೇ ಭೇಟೆಯಲ್ಲಿ ನಿಸ್ಸೀಮ ಕೂಡ. ಆದರೆ ಈ ಮೃಗರಾಜನ ಮ೦ದೆ ಅದು ಹೊಟ್ಟೆ ತು೦ಬಿದ್ದಾಗ ಒಮ್ಮೆ ಅದರ ಬಳಿ ಹೋಗಿ ನೋಡಿ, ನಿಮ್ಮನ್ನು ಮೂಸಿ ಕೂಡ ನೋಡಲ್ಲ. ಹಾಗಿದ್ದಲ್ಲಿ ಅದರ ಭೇಟೆಗೆ ಕೂಡ ಒಂದು ಅಗತ್ಯ ಹಾಗು ಅವಶ್ಯಕತೆ ಇದೆ ಅಂತ ಆಯ್ತಲ್ಲ.

ಬಹಳಷ್ಟು ಬಾರಿ ನಾವು ಹೇಳಿರಬಹುದು ಅಯ್ಯೋ ಸುಮ್ಮನೆ ಬರಬೇಕು ಅನ್ನಿಸ್ತು ನಿಮ್ಮ ಮನೆಗೆ, ಹಾಗೆ ಬ೦ದೆ ಅಂತ. ಆದರೆ ಅದು ನಿಜವಾದ ಮಾತೇ?? ಮನಸ್ಸಿಗೋ ಅಥವಾ ದಾಕ್ಷಿಣ್ಯಕ್ಕೋ ನಮ್ಮ ದೇಹ ಚಲನವನ್ನೂ ಬಯಸಿರುತ್ತದೆ ಹಾಗಾಗಿ ನಾವು ಹೋಗಿರುತ್ತೇವೆ. ಈ ವಿಷಯವಾಗಿ ನಮ್ಮನ್ನು ನಾವೇ ಒಂದು ಬಾರಿ ಪ್ರಶ್ನಿಸಿಕೊಳ್ಳೋಣ (just for our inner soul confirmation). ಹಾಗೆ ಸುಮ್ಮನೆ ನೀವು ದಿನ ನಿತ್ಯ ಮಾಗುವ ಹಲವಾರು ಕಾರ್ಯಗಳಲ್ಲೂ ಈ ಪ್ರಶ್ನೆ ಕೇಳಿಕೊಂಡು ನೋಡಿ. ಈ ವಿಷಯವಾಗಿ ನನ್ನ ಕ್ಯೆ ಹಿಡಿಯೋದು ಖಚಿತ ಅನ್ಕೋತೀನಿ.. [ಈ ಮಾತಿನಲ್ಲಿ ನಿಮಗೆ ಒಪ್ಪಿಗೆ ಇಲ್ಲದಿದ್ದಲ್ಲಿ ದಯವಿಟ್ಟು ಕಾರಣ ಹೇಳಿ ನನಗೆ ವಿವರಿಸಿರಿ, ಧ್ಯನನಾಗುತ್ತೇನೆ ].

ನಮ್ಮ ಮೆದುಳು ಬಹಳ ಜೋಪಾನವಾದ ಭಾಗ ನಮ್ಮ ಶರೀರದಲ್ಲಿ. ಅದರಲ್ಲಿನ ಪ್ರತಿಯೊಂದು ತ೦ತುವಿನ ಸ೦ಘಟನೆ ಕೂಡ ಪ್ರತ್ಯೀಕವಗಿರುತ್ತದೆ. ಹೀಗಿದ್ದ ಮೇಲು ನಿಮಗೆ ನಾವೇನಾದ್ರು ಕೆಲಸವನ್ನು ಸುಮ್ಮನೆ ಮಾಡ್ತೀವಿ ಅಂತ ಅನ್ನಿಸುತ್ತಾ.

ನಿಜವಾಗಿಯೂ ಈ ಅವಶ್ಯಕತೆ ಹಾಗು ಅಗತ್ಯ ಇಲ್ಲದೇನೆ ಪ್ರಪ೦ಚದಲ್ಲಿ ಸ೦ಭಾಷಣೆ ನಡೆಸುವುದು ಮನಸ್ಸು – ಹೃದಯ ಮಾತ್ರ. ನಮ್ಮ ಮು೦ದೆ ಪರಿಚಿತರೋ ಅಥವಾ ಅಪರಿಚಿತರೋ ಎದುರಾದಾಗ ನಗುವು ಹೊರ ಹೊಮ್ಮುವುದು. ಆದರೆ ನಿಮ್ಮ ನೆಚ್ಚಿನವರನ್ನು ಕ೦ಡಾಗ ಮುಗುಳ್ನಗುವು ಹೊರ ಹೊಮ್ಮುವುದು. ಈ ಸ್ವಾಭಾವಿಕವಾದ ಪ್ರತಿಕ್ರಿಯೆಯಲ್ಲಿ ನಿಮ್ಮ ಮೆದುಳು ಕೆಲಸ ಮಾಡುವ ಬದಲು ನಿಮ್ಮ ಹೃದಯ ಮು೦ದಾಗಿರುತ್ತದೆ.

ಮನಸ್ಸುಗಳ ಮಾತು ಮಧುರ.. ಹೃದಯದ ಮಾತು ಮನಸ್ಸಿಗೇ ಹಗುರ..

Advertisements